ಶಿವಮೊಗ್ಗ: ಬಡ ಹಾಗೂ ಮಧ್ಯಮ ವರ್ಗದ ಜನರು ಭ್ರಷ್ಟರನ್ನು ತಿರಸ್ಕರಿಸಿ ತಮ್ಮ ಗೆಲುವಿಗೆ ಮುಖ್ಯ ಕಾರಣವಾಗಿದ್ದಾರೆ ಎಂದು ನೂತನ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಗೆಲುವಿಗೆ ಕಾರಣರಾದ ಪ್ರಜ್ಞಾವಂತ ಮತದಾರರು ಹಾಗೂ ಬೆಂಬಲಿಗರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿದ ತಮ್ಮನ್ನು ಮಾಧ್ಯಮಗಳು ಗುರುತಿಸಿ ಬೆಂಬಲಿಸಿದವು. ಜನರಿಗೆ ಹೆಚ್ಚಿನ ರೀತಿಯಲ್ಲಿ ಪರಿಚಯಿಸಿದ್ದರಿಂದ ಅನುಕೂಲವಾಯಿತು. ಪ್ರಬಲರ ಎದುರು ಸ್ಪರ್ಧಿ ಸಲು ನೆರವಾಯಿತು ಎಂದರು.
ಮುಂದಿನ ದಿನಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದವರ ಹಿತವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಅಗತ್ಯವಿರುವ ಕೆಲಸಗಳಿಗೆ ಆದ್ಯತೆ ನೀಡಲಾಗುವುದು. ಏಳೆಂಟು ಕಡೆಗಳಲ್ಲಿ ಮೇಲ್ಸೇತುವೆ ನಿರ್ಮಾಣ, ಗುದ್ದಲಿ ಪೂಜೆ ಆಗಿಯೂ ನನೆಗುದಿಗೆ ಬಿದ್ದಿರುವ ವಿವಿಧ ಕಾಮಗಾರಿ, ಬಗೆಹರಿಯದ ಒಳಚರಂಡಿ ಕೆಲಸ, ಹಕ್ಕುಪತ್ರ ವಿತರಣೆ, ಟ್ಯಾಕ್ಸಿ ಚಾಲಕರೂ ಸೇರಿದಂತೆ ಬಡವರಿಗೆ ಸೂರು ನಿರ್ಮಾಣ ಮೊದಲಾವುಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.
ನಗರಸಭೆಯು ಕುಡಿಯುವ ನೀರಿನ ಶುಲ್ಕ ಹೆಚ್ಚಿಸಿರುವುದು ಹಾಗೂ ಹೊಸದಾಗಿ ತ್ಯಾಜ್ಯ ವಿಲೇ ಶುಲ್ಕ ಜಾರಿಗೊಳಿಸಿರುವುದು ಏಕಪಕ್ಷೀಯ ನಿರ್ಧಾರವಾಗಿದೆ. ಈ ಸಂಬಂಧ ಆಯುಕ್ತರೊಂದಿಗೆ ಚರ್ಚಿಸಿ ಶುಲ್ಕ ಕಡಿಮೆ ಮಾಡುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ನಗರದ ವಿವಿಧ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳಲ್ಲಿ ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದರು.
ಸೂರಿಲ್ಲದವರಿಗೆ ಸೂರು ಕಲ್ಪಿಸುವ ಕೆಲಸಕ್ಕೆ ಹೆಚ್ಚಿನ ಗಮನಹರಿಸಲಾಗುವುದು. ಈಗಾಗಲೇ ನಗರಸಭೆ ಯಿಂದ ಅರ್ಜಿ ಕರೆಯಲಾಗಿದ್ದು, ಅದರಲ್ಲಿರುವ ಅರ್ಹರನ್ನು ಪರಿಗಣಿಸಲಾಗುವುದು ಎಂದರು.
ಚುನಾವಣೆಗೂ ಮೊದಲು ತಮ್ಮ ವಿರುದ್ಧ ಸಾಕಷ್ಟು ಅಪಪ್ರಚಾರ ನಡೆಸಿದರು. ತಾವು ದುಡ್ಡಿಗೆ ಡೀಲ್ ಆಗಿದ್ದೇವೆ ಎನ್ನುವ ಮಟ್ಟಿಗೂ ಮಾತನಾಡಿದರು. ಆದರೆ ಆ ಬಗ್ಗೆ ಚಿಂತಿಸದೆ ಗೆಲುವಿನ ಕಡೆಗೆ ಗಮನ ಹರಿಸಿದೆ. ಆದರೆ ಇಂತಹ ಕ್ಷುಲ್ಲಕ ಪ್ರಚಾರ ಮಾಡಿದವರು ಈಗ ತಮ್ಮ ಸೋಲಿನ ಹಿಂದಿನ ಅಂಶಗಳನ್ನು ಚಿಂತನೆ ನಡೆಸಿರಬಹುದು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಎಲ್ಲ ಧರ್ಮ ಹಾಗೂ ಆಚರಣೆಗಳನ್ನು ಸಮಾನವಾಗಿ ಕಾಣುತ್ತದೆ. ಕೋಮು ಭಾವನೆ ಪ್ರಚೋದಿಸುವ ಯಾವುದೇ ಅಂಶಗಳನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪಕ್ಷದ ಜಿಲ್ಲಾ ವಕ್ತಾರ ಎಸ್.ಪಿ.ದಿನೇಶ್, ಪ್ರಮುಖರಾದ ಇಸ್ಮಾಯಿಲ್ ಖಾನ್, ಎಚ್.ಸತ್ಯನಾರಾಯಣ, ರುದ್ರೇಶ್, ಉಸ್ಮಾನ್, ಸಿದ್ದಪ್ಪ ಮತ್ತಿತರರು ಹಾಜರಿದ್ದರು.
--------------
ಶಾಸಕರಾಗಿ ಆಯ್ಕೆಯಾದ ನಂತರ ಪ್ರಸನ್ನ ಕುಮಾರ್ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸೇರಿದಂತೆ ಅನೇಕರು ಗೈರಾಗಿದ್ದರು. ಆದರೆ, ಚುನಾವಣೆ ಪ್ರಚಾರದ ವೇಳೆ ಕಾಣಿಸದ ಮುಖಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದವು. ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ ನೂತನ ಶಾಸಕರನ್ನು ಅಭಿನಂದಿಸಿ ನಿರ್ಗಮಿಸಿದರು.
http://vijaykarnataka.indiatimes.com/articleshow/19975891.cms

No comments:
Post a Comment